ಭಾನುವಾರ, ಜನವರಿ 2, 2011

ಕಾಡು ಸೂರ್ಯಕಾಂತಿ ಹೂಗಳು

ºÉÆgÉ ºÉÆvÀÛ vÀgÀÄt DAiÀiÁ¸À¢AzÀ

vɪÀjAiÉÄÃgÀÄwÛzÀݼÀÄ, C°è DPÁ±À ªÀÄÄlÄÖªÀAvÉ

¥ÉÇzÉAiÀiÁV PÁqÀĸÀÆAiÀÄðPÁAw ºÀÆUÀ¼ÀÄ

¸ÀAvÀæ¸ÀÛgÀ UÉÆÃ½UÉ vÀ¯É¨ÁVªÉ PÉ®ªÀÅ ,

»¤ßÃj£À°è ªÀÄÄR £ÉÆÃrPÉÆ¼ÀÄîwÛªÉ.

ªÉÄÊ®ÄUÀlÖ¯É zÀÆgÀ ºÉ¨Áâ«£ÀAvÉ gÀ¸ÉÛ.

¸ÀÆAiÀÄð£É¯ÉÆèà vÀ¯ÉªÀÄgɹPÉÆrzÁÝ£É.

DzÀgÀÆ vÀ¯ÉAiÉÄwÛªÉ EªÀÅ.

¤ÃgÉgÉzÀÄ ¨É¼É¹®è. vÁªÉà vÁªÁV ¨É¼É¢ªÉ.

ºÉÆ®zÀ ºÀÆUÀ¼ÀAvÉ ¨É¼É PÉÆ¬ÄzÀ ªÉÄïÉ

MtUÀzÉ vÀªÀÄäµÀÖPÉÌ CgÀ½ £ÀUÀÄvÀÛªÉ.

PÁqÀÄ ¸ÀÆAiÀÄðPÁAw ºÀÆUÀ¼ÀÄ.

©Ã¢ ªÀÄPÀ̼À ªÀÄÄUÀÞ £ÀUÀÄ«£ÀAvÉ

PÀnÖUÉ ºÉÆvÀÄÛ ¸ÁUÀĪÀ ºÀÄqÀÄVAiÀÄAvÉ

vÀ¯ÉAiÀÄ°è ¨sÁgÀ ªÉÆUÀzÀ°è ªÀÄAzÀºÁ¸À

UÀÄA¥ÁV eÁvÉæAiÀÄ d£ÀgÀAvÉ

CPÁ®zÀ ªÀļɬÄAzÀ ªÀÄÆrzÀ ªÀļɩ®Äè.

ªÁå£ï UÉÆÃ£À avÀæzÀ ZËPÀlÄÖ PÀ¼Àa

§AiÀÄ®°è ¤°¹zÀAvÉ.

ªÁ¶ðPÀUÀ¼À®è EªÀÅ

§ºÀĪÁ¶ðPÀUÀ¼ÀÄ.

MAzÉà PÀ£À¹£À zÁgÀ ªÀÈvÁÛPÁgÀ ¸ÀÄvÀÄÛªÀAvÉ

vÀÄ¢ªÉÆzÀ°®èzÀ ªÀÄÄAzÀĪÀjPÉ.

¤Ã°, ºÀ¼À¢, ºÀ¹gÀÄ »£É߯ÉAiÀİè

zÁj zÀÆgÀ¢UÀAvÀzÀªÀgÉUÀÆ

ªÀÄÄAzÉ ªÀÄÄAzÉ

PÁqÀÄ ¸ÀÆAiÀÄðPÁAw ºÀÆUÀ¼ÀÄ ¨É£Àß»AzÉ.

J¯ï, ¹. ¸ÀÄ«ÄvÁæ. wÃxÀðºÀ½î.

J¯ï ¹ ¸ÀÄ«ÄvÁæ,

C²é¤,C¤PÉÃvÀ£À gÀ¸ÉÛ

¸ÉÆ¥ÀÅöàUÀÄqÉØ.

ಗುರುಗಳ ದಿನ ನಾಯಕರ ನೆನಪು:ಸುಮಿತ್ರಾ ಬರಹ

ಸೋಮವಾರ, 6 ಸೆಪ್ಟೆಂಬರ್ 2010 (04:49 IST)
ಜಿಎಚ್ ನಾಯಕ್

ಸಾಹಿತ್ಯದ ಪಾಠ ಮಾಡುವ ಅಧ್ಯಾಪಕರು ಸಹಜವಾಗಿಯೇ ಬೇರೆ ವಿಷಯಗಳ ಅಧ್ಯಾಪಕರಿಗಿಂತ ಹೆಚ್ಚು ತಮ್ಮ ವ್ಯಕ್ತಿತ್ವದ ಪ್ರಭಾವವನ್ನು ವಿದ್ಯಾರ್ಥಿಗಳ ಮೇಲೆ ಬೀರುತ್ತಾರೆ. ಇದು ಅವರ ಪ್ರಯತ್ನವಿಲ್ಲದೆ ನಡೆಯುವಂಥದು. ಹೀಗೆ ತಿರುಗಿ ನೋಡಿದಾಗ ನೆನಪಾಗುವವರು ಜಿ.ಎಚ್. ನಾಯಕ್. ನಮಗೆ ಸಾಹಿತ್ಯ ವಿಮರ್ಶೆಯನ್ನು ಕಲಿಸಿದ ಮೇಷ್ಟ್ರು ಕೆಲವು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹೀಗೆ ಮಾಡಿ ಎಂದು ಹೇಳುತ್ತಾರೆ. ಇನ್ನು ಕೆಲವರು ಮೌನವಾಗಿಯೇ ತಮ್ಮ ನಡವಳಿಕೆಯಿಂದಲೇ ಮಾರ್ಗದರ್ಶನ ಮಾಡುತ್ತಾರೆ. ಜಿ.ಎಚ್.ನಾಯಕ್ ಈ ಎರಡನೇ ಗುಂಪಿನವರು. ಚಿಕ್ಕ ವಿಷಯಗಳಿಗೂ ಗಮನ ಕೊಡುವುದು, ತಪ್ಪುಗಳಾಗದಂತೆ ಕಾಳಜಿ ವಹಿಸುವುದು, ಸ್ವಲ್ಪ ಹೆಚ್ಚೇ ಅನ್ನಿಸುವ ನೈತಿಕಕಾಳಜಿ, ತಮ್ಮ ಅಭಿಪ್ರಾಯಗಳನ್ನು ಹೇಳುವುದರಲ್ಲಿ ನಿಷ್ಠುರರಾದರೂ ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡಲಾರರು. ಇವು ಅವರ ವ್ಯಕ್ತಿತ್ವದ ಮಹತ್ವದ ಅಂಶಗಳು. 'ಬಾಗಿಲಲ್ಲೇ ನಿಂತು ನಮ್ಮ ಡಿಪಾರ್ಟಮೆಂಟ್ ಗೆ ಬನ್ನಿ ಎಂದು ಕರೆಯುವ ಸಬ್ಜೆಕ್ಟ್ ಗಳಿರುವಾಗ ನೀವು ಕನ್ನಡ ಯಾಕೆ ತೆಗೆದುಕೊಂಡಿರಿ', ಎಂದು ಕೇಳಿ ನಾವೆಲ್ಲ ಸಾಹಿತ್ಯಾಸಕ್ತರು ಎಂದು ಖಚಿತಪಡಿಸಿಕೊಂಡರು. ಪ್ರತಿಯೊಂದು ವಿಚಾರವನ್ನೂ ಬಹಳ ಕಾಳಜಿಯಿಂದ ಗಮನಿಸುವುದೂ ಮತ್ತು ಕಾಳಜಿ ಎಂಬ ಪದವನ್ನು ತಾವೇ ತಮ್ಮ ಮಾತಿನಲ್ಲಿ ತುಂಬಾ ಉಪಯೋಗಿಸುವುದನ್ನು ಗಮನಿಸಿ ನಾವು ಅವರನು 'ಚಿರಂತನ ಕಾಳಜಿಯ ನಾಯಕರು' ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು.

ಮಾನಸಗಂಗೋತ್ರಿಯಲ್ಲಿ ಎಂಎ, ಓದುತ್ತಿದ್ದ ಸಂದರ್ಭ. ತೀರ್ಥಹಳ್ಳಿಯ ಕಾಲೇಜ್ ನಿಂದ ಮೈಸೂರಿನ ಮಾನಸ ಗಂಗೋತ್ರಿಗೆ ಹೋದ ಸಂತೋಷದಲ್ಲಿ ಮೊದಲನೇ ಟೆಸ್ಟ್ ಬಂದಿದ್ದೇ ತಿಳಿಯಲಿಲ್ಲ. ಮೊದಲನೇ ಸೆಮ್ ನ ಮೊದಲ ಇಂಟರ್ನಲ್ ಟೆಸ್ಟ್ ಮುಗಿದಿತ್ತು. ಹತ್ತು ಅಂಕಗಳ ಉತ್ತರ ಪತ್ರಿಕೆ ಮೌಲ್ಯಮಾಪನವಾಗಿ ನಮ್ಮ ಕೈಲಿತ್ತು. ನೋಡಿಕೊಂಡೆವು. ಹತ್ತಕ್ಕೆ ಏಳು ಅಂಕ ಅತಿಹೆಚ್ಚು. ಎರಡನೆಯವರಿಗೆ ಆರೂಮುಕ್ಕಾಲು, ಮತ್ತೊಬ್ಬರಿಗೆ ಆರೂವರೆ, ಆರೂಕಾಲು. ಅದುವರೆಗೆ ನಮಗೆ ಅರ್ಧ ಮಾರ್ಕ್ಸ್ ಕೊಡುವುದು ತಿಳಿದಿತ್ತೇ ಹೊರತು ಕಾಲು, ಮುಕ್ಕಾಲು ಅಂಕಗಳನ್ನು ಕೊಡಬಹುದೆಂಬ ಊಹೆಯೂ ಇರಲಿಲ್ಲ. ನಾವು ಆಶ್ಚರ್ಯದಿಂದ ನಮ್ಮ ಉತ್ತರಪತ್ರಿಕೆಗಳ ತುಲನೆ ಮಾಡಿಕೊಳ್ಳುವಾಗ ಜಿಎಚ್‌ಎನ್. ಮೇಷ್ಟ್ರು ಅರ್ಧ ಮಾರ್ಕ್ಸ್ ಹೆಚ್ಚು ಕಡಿಮೆ ಯಾಕೆಂದು ವಿವರಣೆ ನೀಡುತ್ತಿದರು. ಚೆನ್ನಾಗಿ ಬರೆದ ಉತ್ತರಗಳಲ್ಲೂ ಕಿಂಚಿತ್ ವ್ಯತ್ಯಾಸ ಇರುವುದನ್ನು ಈ ಅಂಕಗಳು ಸೂಚಿಸುತ್ತಿದ್ದವು. ಅದು ಜಿಎಚ್ ನಾಯಕರ ನಿಷ್ಪಕ್ಷಪಾತ ಮೌಲ್ಯಮಾಪನದ ರೀತಿ.

ಎಂಎ ತರಗತಿಗಳ ಮೊದಲ ದಿನ ಅಧ್ಯಾಪಕರ ಪರಿಚಯ ಮತ್ತು ಸೆಮೆಸ್ಟರ್ ಪದ್ಧತಿಯ ನಿಯಮಗಳನ್ನು ಹೇಳಲು ಅಧ್ಯಯನ ಸಂಸ್ಥೆಯ ಎರಡನೇ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮವೊಂದನ್ನೇರ್ಪಡಿಸಿದ್ದರು. ನಮ್ಮೆದುರಿಗೆ ಮರದ ಕುರ್ಚಿಗಳಲ್ಲಿ ಸಾಲಾಗಿ ಸಿಪಿಕೆ, ಜಿಎಚ್ ನಾಯಕ್, ಎಚ್‌ಎಂ ಚನ್ನಯ್ಯ, ಎಲ್.ಬಸವರಾಜು, ಡಿ. ವಿಜಯ, ವೆಂಕಟಾಚಲ ಶಾಸ್ತ್ರಿ, ರಾಗೌ, ಡಿಕೆ ರಾಜೇಂದ್ರ ಇನ್ನೂ ಕೆಲವರು ಕುಳಿತಿದ್ದರು. ಅಧ್ಯಾಪಕರು ವಿದ್ಯಾರ್ಥಿಗಳ ಪರಸ್ಪರ ಪರಿಚಯ ಆಯಿತು. ಹಾಮಾ ನಾಯಕರು ಆಗ ಅಧ್ಯಯನ ಸಂಸ್ಥೆಯ ನಿರ್ದೇಶಕರು. ಅವರ ಬಿಗುವಿನ ನಡತೆ ನಮಗೆ ಭಯ ಹುಟ್ಟಿಸುವಂತಿದ್ದರೆ ಜಿಎಚ್‌ಎನ್ ಮತ್ತು ವಿಜಯಾ ದಬ್ಬೆ ಭರವಸೆ ಹುಟ್ಟಿಸುವಂತೆ ಸೌಮ್ಯವಾಗಿ ಕಂಡರು. ಸೆಮೆಸ್ಟರ್ ಪದ್ಧತಿ ಅದೇ ಮೊದಲನೇ ಸಲ ಪ್ರಾರಂಭವಾಗಿತ್ತು. ಜಿಎಚ್ಎನ್, ಜಿಎಸ್ಎಸ್

ನಾನಂತೂ ಮೈಸೂರಿನಲ್ಲಿ ಕನ್ನಡ ಎಂಎ ಓದಬೇಕೆಂದು ಹೈಸ್ಕೂಲಿನಲ್ಲೇ ಕನಸು ಕಂಡವಳು. ಅದಕ್ಕೆ ಕಾರಣ ಬೇಸಿಗೆರಜೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಅಲ್ಲಿ ನನ್ನ ತಾಯಿಯ ಸೋದರಸಂಬಂಧಿಗಳು ಭೇಟಿಯಾಗುತ್ತಿದ್ದರು. ಯಾವಾಗಲು ಕಾದಂಬರಿಯಲ್ಲಿ ತಲೆ ಹುದುಗಿಸಿಕೊಂಡಿರುತ್ತಿದ್ದ ನನಗೆ ಕನ್ನಡ ಎಂಎ ಓದುವ ಸಲಹೆ ಕೊಟ್ಟವರು ಆಗ ಮಾನಸಗಂಗೋತ್ರಿಯಲ್ಲಿ ಜಿಯಾಲಜಿ ಎಂಎಸ್ಸಿ ಓದುತ್ತಿದ್ದ ನನ್ನ ಸೋದರ ಸಂಬಂಧಿ. ಫಸ್ಟ್ ಇಯರ್ ಪಿಯೂಗೆ ಮುಲ್ಕಿ ವಿಜಯಾ ಕಾಲೇಜ್ ಹಾಸ್ಟೆಲ್ ನಲ್ಲಿದ್ದುಕೊಂಡು ಸೈನ್ಸ್ ಓದುವ ವ್ಯವಸ್ಥೆ ಮಾಡಿದ್ದ ಅಪ್ಪನ ಆಸೆಗೆ ವಿರುದ್ಧವಾಗಿ ನಾನು ಆರ್ಟ್ಸ್ ಗೆ ಬದಲಾಯಿಸಿಕೊಂಡು ತೀರ್ಥಹಳ್ಳಿಯಲ್ಲಿ ಪದವಿ ಮುಗಿಸಿ ಮೈಸೂರಿಗೆ ಕನ್ನಡ ಎಂಎ ಓದಲು ಬಂದು ಹಾಸ್ಟೆಲ್ ನಲ್ಲಿದ್ದ ಎರಡನೆ ದಿನವೆ ಮುಲ್ಕಿ ಕಾಲೇಜಿನಲ್ಲಿ ನನ್ನ ತರಗತಿಯಲ್ಲಿದ್ದ ಹುಡುಗಿಯೊಬ್ಬಳು ನನ್ನ ಗುರುತು ಹಿಡಿದು ಮಾತಾಡ್ಸಿದಳು. ಅವಳು ವೀಣಾ ಸುವರ್ಣ ಎಂಎಸ್ಸಿ ಜ಼ೂಆಲಜಿಗೆ ಸೇರಿದ್ದಳು.

ಅಧ್ಯಾಪಕರ ಗುಂಪಿನಲ್ಲಿ ಜಿಎಚ್ ನಾಯಕರು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದರು. ಅವರ ಮಾತಿನ ರೀತಿ, ಚಿಂತನೆಗಳೂ ಭಿನ್ನವಾಗಿದ್ದವು. ಕೆಲವು ಅಧ್ಯಾಪಕರು ಮಾಡುತ್ತಿದ್ದಂತೆ ಮಾತಿನ ನಡುವೆ ಜಾತಿಯನ್ನು ಎಳೆದುತರುತ್ತಿರಲಿಲ್ಲ. 'ವಿನಯ ವಿಮರ್ಶೆ'ಯನ್ನು ಬರೆದಂತೆಯೇ ಬದುಕಿದವರೂ ಕೂಡ. ಅವರು ಸ್ಕೂಟರ್ ಮೇಲೆ ಕುಳಿತು ಹೋಗುವಾಗಲೂ ತಲೆಯನ್ನು ಪಕ್ಕಕ್ಕೆ ವಾಲಿಸಿಕೊಂಡು ಸಂಕೋಚದಿಂದೆಂಬತೆ ಕುಳಿತಿರುತ್ತಿದ್ದರು. ಹಾ.ಮಾ. ನಾಯಕರು ಇದಕ್ಕೆ ತದ್ವಿರುದ್ಧ. ಸಂಜೆ ಏನಾದರೂ ಸಿಟಿ ಕಡೆ ಹೋಗಲು ನಾವು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿರುವಾಗ ಐದೂವರೆಗೆ ಮನೆಗೆ ಹೊರಟ ಹಾ.ಮಾ. ನಾಯಕರ ಫಿಯೆಟ್ ಕಾರು ಅಧ್ಯಯನ ಸಂಸ್ಥೆಯ ಹಿಂಭಾಗದಿಂದ ಕೆಂಬಣ್ಣದ ಮಣ್ಣಿನ ರಸ್ತೆಯಲ್ಲಿ ದೂಳೆಬ್ಬಿಸಿಕೊಂಡು ವೇಗವಾಗಿ ಬಂದು ಬಸ್ ಸ್ಟಾಪ್ ಬಳಿ ತಿರುಗುವಾಗ ನಾವು ಲೈಬ್ರರಿಯಲ್ಲಿರಬೇಕಾದ ಸಮಯದಲ್ಲಿ ಇಲ್ಲಿರುವುದನ್ನು ಅವರು ಗಮನಿಸಿದರೆ ಎಂದು ಭಯವಾಗುತ್ತಿತ್ತು.

ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ. ಕೆಲವೊಮ್ಮೆ ಅವರ ಅಭಿಪ್ರಾಯಗಳ ಜತೆ ಮುಖಾಮುಖಿಯಾಗಿ ಹೊಸ ವಿಚಾರಗಳೂ ಹೊಳೆಯುತ್ತವೆ. ಜಿ.ಎಚ್.ಎನ್ ಪಾಠದ ಜತೆ ಅವರ ವ್ಯಕ್ತಿತ್ವವೊ ನಮ್ಮನ್ನು ಆಕರ್ಷಿಸುತ್ತಿತು. ಪ್ರತೀ ಕ್ಲಾಸೂ ಮೊದಲನೇ ತರಗತಿಯೆಂಬಂತೆ ಅವರು ಅಧ್ಯಯನ ಮಾಡಿಕೊಂಡು ಬರುತ್ತಿದ್ದುದು ತಿಳಿಯುತ್ತಿತ್ತು.

ಐಚ್ಛಿಕ ವಿಮರ್ಶೆಯ ತರಗತಿಗಳಲ್ಲಿ ಅವರು ಬೋಧಿಸುತ್ತಿದ್ದ ಎಲಿಯಟ್ ನ 'ಪರಂಪರೆ ಮತ್ತು ವ್ಯಕ್ತಿಪ್ರತಿಭೆ', ಐ.ಎ.ರಿಚರ್ಡ್ಸ್ ನ 'ಸಂವಹನ ಸಿದ್ಧಾಂತ ಮತ್ತು ಮೌಲ್ಯ ಸಿದ್ಧಾಂತಗಳು' ನಿನ್ನೆ ಕೇಳಿದಂತೆನಿಸುತ್ತವೆ. ತುಂಬಾ ಜನ 'ಫೋಕ್ ಲೋರ್' ಆಯ್ಕೆ ಮಾಡಿಕೊಂಡು ನಾವು ಆರು ಜನ ಮಾತ್ರ ವಿಮರ್ಶೆ ಕ್ಲಾಸಿನಲಿದ್ದೆವು. 'ವಿಮರ್ಶೆ ಓದದೆ ಸಾಹಿತ್ಯದ ಓದು ಪೂರ್ಣವಲ್ಲ' ಎಂದು ನಾಯಕರು ನಮಗೆ ಹೇಳುತ್ತಿದ್ದರು. ಬೇಂದ್ರೆಯವರ ನಾದಲೀಲೆ', ಕುವೆಂಪು ಆಯ್ದ ಕವಿತೆಗಳು, ಅಡಿಗರ ಭೂಮಿಗೀತಗಳನ್ನು ಅವರು ಪಾಠ ಹೇಳುತ್ತ್ತಿದ್ದ ಬಗೆ, ಕವಿತೆಯೊಂದರ ಹೃದಯ ಪ್ರವೇಶಿಸುವುದು ಹೇಗೆಂದು ತಿಳಿಸಿಕೊಟ್ಟಿತು.

ಶಿಷ್ಟವಾದ ಭಾಷೆ ಬಳಸುತ್ತಿದ್ದ ಅವರು ಸದಭಿರುಚಿಗೆ ಮೀರಿದ ವಿಷಯಗಳು ಏನಾದರು ಟೆಕ್ಸ್ಟ್ ನಲ್ಲಿ ಬಂದರೆ ಕೆಂಪಾಗಿಬಿಡುತ್ತಿದ್ದರು. ಬರವಣಿಗೆ ಮತ್ತು ಮಾತಿನಲ್ಲಿ ತಾರ್ಕಿಕರಂತೆ ಕಂಡರೂ ಅಂತರಂಗದಲ್ಲಿ ಮೃದು, ಭಾವುಕ ಹೃದಯಿ. ಅವರ ಎರಡನೆಯ ಮಗು ಪ್ರೀತಿಯ ಅಕಾಲಿಕ ಅಗಲಿಕೆಯಿಂದಾದ ಆಘಾತದಿಂದ ಹೊರಬರಲು ಅವರಿಗೆ ದಶಕಗಳೇ ಬೇಕಾದವು.

ಕವಿತೆಯ 'ಗೇಯಗುಣ' ಅರ್ಥಕ್ಕೆ ಪೂರಕವಾಗಿರದೆ ತಾನೇ ವಿಜೃಂಭಿಸಿದರೆ ಕವಿತೆಯ ಪರಿಣಾಮ ಕಡಿಮೆಯಾಗುತ್ತದೆ ಎಂದು ಉದಾಹರಣೆಗೆ ತಾವೇ ಕವಿತೆಯೊಂದನ್ನು ಹಾಡಿ ತೋರಿಸಿದ್ದರು. ಬೇಂದ್ರೆಯವರ ಕುರುಡುಕಾಂಚಾಣ ಎಂದು ನೆನಪು. ಅವರು ಅಷ್ಟು ಚೆನ್ನಾಗಿ ಹಾಡುತ್ತಾರೆಂದು ಅವತ್ತೇ ನಮಗೆ ತಿಳಿದಿದ್ದು. ತರಗತಿಯ ಹೊರಗೆ ಅವರು ಆಗ ವಿದ್ಯಾರ್ಥಿಗಳ ಜತೆ ಮಾತನಾಡುತ್ತಿದ್ದುದೇ ಕಡಿಮೆ.

ಅರ್ಧದಲ್ಲಿ ನಿಂತಿದ್ದ ನನ್ನ ಸಂಶೋಧನೆ ಮುಂದುವರೆಯಲು ಕಾರಣ ನಾಯಕರೇ. ‘ಕುವೆಂಪು ೯೦' ಕಾರ್ಯಕ್ರಮಕ್ಕಾಗಿ ಕುಪ್ಪಳಿಗೆ ಬಂದಿದ್ದ ಅವರು ಕುವೆಂಪು ಮತ್ತು ಕಾರಂತರ ಕಾದಂಬರಿಗಳ ತೌಲನಿಕ ಅಧ್ಯಯನ ಮಾಡುವಂತೆ ಸೂಚಿಸಿದರು.

ಒಂದು ರೀತಿಯಲ್ಲಿ ಗಾಂಧಿವಾದಿಯಾಗಿರುವ ನಾಯಕರು ಸರಳ ಜೀವನದ ಜತೆಗೆ ಹಣಕಾಸಿನ ವಿಚಾರದಲ್ಲೂ ಪಾರದರ್ಶಕವಾಗಿರಬೇಕೆನ್ನುವವರು. ಮನೆ, ಉಡುಗೆ ತೊಡಿಗೆ ಎಲ್ಲವೂ ಸರಳ. ಮೀರಕ್ಕ ಕೂಡ ಯಾವಾಗಲೂ ನೂಲಿನ ಸೀರೆ ಧರಿಸುವವರು. ನಾವು ಎಂಎ ಓದುತ್ತಿದ್ದಾಗ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಯಾವುದೋ ಕಾರ್ಯಕ್ರಮ ನೋಡಲು ಮೀರಕ್ಕ, ಮಗಳು ಕೀರ್ತಿಯೊಡನೆ ಬಂದಿದ್ದರು. ಅವರುಟ್ಟ ರೇಷ್ಮೆ ಸೀರೆಯನ್ನು ಚೆನ್ನಾಗಿದೆಯೆಂದು ನಮ್ಮ ಗುಂಪಿನಲ್ಲಿದ್ದವರು ಯಾರೋ ಹೇಳಿದಾಗ ಕೀರ್ತಿ ತಕ್ಷಣ ಇದು ಅಮ್ಮನಿಗೆ ಯಾರೋ ಪ್ರಸೆಂಟ್ ಮಾಡಿದ್ದು ಅಪ್ಪ ಬರೀ ಕಾಟನ್ ಸೀರೆ ಕೊಡಿಸ್ತಾರೆ ಅಂತ ತಮಾಷೆಗೆಂಬಂತೆ ಹೇಳಿದಳು. ಆದರೆ ಅದು ಅವರಿಬ್ಬರ ಸರಳತೆಯನ್ನು ಹೇಳುತ್ತಿತ್ತು. ತಮಗೆ ಸಂಬಂಧವಿಲ್ಲದ ವಿಷಯಗಳನ್ನು ಕುರಿತು ಅವರು ಟೀಕೆ ಟಿಪ್ಪಣಿ ಮಾಡುತ್ತಿರಲಿಲ್ಲ, ಒಬ್ಬ ಮಾದರಿ ಅಧ್ಯಾಪಕನಿಗಿರಬೇಕಾದ ಎಲ್ಲ ಗುಣಗಳು ನಾಯಕರಲ್ಲಿದ್ದವು.

ಅನಂತಮೂರ್ತಿ, ನಾಯಕ್ವಿದ್ಯಾರ್ಥಿಗಳ ಜತೆ ಒಂದು ಅಂತರವನ್ನು ಕಾಪಾಡಿಕೊಳ್ಳುತ್ತಿದ್ದ ಮೇಷ್ಟ್ರು ನಾಯಕರು. ನಮ್ಮದು ಸೆಮೆಸ್ಟರ್ ಪದ್ಧತಿಯಾಗಿದ್ದುದೂ ಅದಕ್ಕೆ ಕಾರಣವಾಗಿರಬೇಕು. ನಾನು ಮೊದಲನೇ ಸಲ ಅವರ ಮನೆಗೆ ಹೋಗಿದ್ದು ತೀರ್ಥಹಳ್ಳಿಯಲ್ಲಿ ನಾನು ಅಧ್ಯಾಪಕಿಯಾದ ಮೇಲೆ. ನನ್ನ ಗೆಳತಿಯೊಬ್ಬಳು ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದು ಹೊಸದಾಗಿ ಮದುವೆಯಾದ ಅವಳನ್ನು ಮೀರಾನಾಯಕ ಊಟಕ್ಕೆ ಕರೆದಿದ್ದರು. ಏನೋ ಕಾರಣಕ್ಕೆ ಮೈಸೂರಿಗೆ ಹೋಗಿದ್ದ ನನ್ನನ್ನೂ ಆಹ್ವಾನಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ವಿಜಯಾ ದಬ್ಬೆಯವರನ್ನು ಭೇಟಿಯಾಗಿ ಆಮೇಲೆ ನಾಯಕರ ಮನೆಗೆ ನಡೆದೇ ಹೋದೆ. ಅವರಾಗ ಮಾನಸಗಂಗೋತ್ರಿಯ ಅಧ್ಯಾಪಕರ ವಸತಿಗೃಹದಲ್ಲಿದ್ದರು. ಅಧ್ಯಯನ ಸಂಸ್ಥೆಯ ಕಾರಿಡಾರ್ ನಲ್ಲಿ ನಾವು ಕೆಲವು ಗೆಳತಿಯರು ವಿಜಯಾ ದಬ್ಬೆಯವರ ಜತೆ ಮಾತಾಡ್ತಾ ನಿಂತಿದ್ದಾಗ ನಮ್ಮ ಕಡೆಗೆ ನೋಡದೆ ಜಿಎಚ್‌ಎನ್ ಅವರ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋದರು. ನಾನು ಅವರ ಮನೆಗೆ ಹೋದ ಮೇಲೆ ಮೀರಕ್ಕನವರ ಬಳಿ 'ನಾನು ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಬಂದೆ' ಎಂದು ಹೇಳುತ್ತಿದ್ದಾಗ ನಾಯಕರು ಅಲ್ಲಿ ನಿಂತಿದ್ದ ಹುಡುಗಿಯರ ಗುಂಪಿನಲ್ಲಿ ನೀವೂ ಇದ್ದಿರಾ? ಅಂತ ಕೇಳಿದರು. ಸಾಮಾನ್ಯವಾಗಿ ಅವರು ತರಗತಿಯ ಹೊರಗೆ ವಿದ್ಯಾರ್ಥಿನಿಯರ ಕಡೆಗೆ ನೋಡುತ್ತಿರಲಿಲ್ಲ. ನವ್ಯ ಕಾವ್ಯದ ಪ್ರಭಾವ ಇನ್ನೂ ತೀವ್ರವಾಗಿದ್ದ ಆ ಸಮಯದಲ್ಲಿ ನಾಯಕರ ಬದುಕು ಬರಹಗಳ ಸಂಯಮ ಎದ್ದು ತೋರುವಂತಿತ್ತು.

ಈಗ ಎಪ್ಪತ್ತೈದು ದಾಟಿದ ನಂತರ ನಾಲ್ಕೈದು ಸಲ ಬೇರೆ ಬೇರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ದೈಹಿಕವಾಗಿ ಕುಗ್ಗಿದ್ದರೂ ತಮ್ಮ ಎಂದಿನ ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದಾರೆ. ಮೈಸೂರಿಗೆ ಹೋದಾಗ ಅವರ ಮನೆಗೆ ನಾವು ಹೋಗದೇ ಬರುವುದಿಲ್ಲ. ಹೊಸದಾಗಿ ಪ್ರಕಟವಾದ ಅವರ ಪುಸ್ತಕಗಳನ್ನು ಶುಭಾಶಯದ ಹಸ್ತಾಕ್ಷರಗಳ ಜೊತೆಗೆ ಅವರು ಕೊಡದೇ ಇರುವುದಿಲ್ಲ.

(ಫೋಟೋ ಕೃಪೆ:ಪಂಡಿತಾರಾಧ್ಯ)

ಮಿಲಿಂದ

ಶನಿವಾರ, ಜನವರಿ 1, 2011

ತೇಜಸ್ವಿ ನೆನಪಿನ ಚಿತ್ರಗಳು- ಎಲ್.ಸಿ. ಸುಮಿತ್ರಾ ಬರಹ

ತೇಜಸ್ವಿ ನೆನಪಿನ ಚಿತ್ರಗಳು- ಎಲ್.ಸಿ. ಸುಮಿತ್ರಾ ಬರಹ
ಡಾ.ಎಲ್ .ಸಿ ಸುಮಿತ್ರಾ
ಸೋಮವಾರ, 5 ಏಪ್ರಿಲ್ 2010 (09:54 IST)
ತೇಜಸ್ವಿ

ಸರಳ, ನೇರ, ಸ್ಪಷ್ಟವಾಗಿ ಬರೆಯುತ್ತ, ಬೆರೆಗುಗೊಳಿಸುತ್ತ ಬದುಕಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತೀರಿಹೋಗಿ ಇಂದಿಗೆ ಮೂರು ವರ್ಷಗಳಾಯಿತು. ಅವರನ್ನು ಹತ್ತಿರದಿಂದ ಬಲ್ಲ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರು ತಮ್ಮ ನೆನಪುಗಳನ್ನಿಲ್ಲಿ ಮೆಲುಕು ಹಾಕಿದ್ದಾರೆ...

ನಮ್ಮನ್ನೆಲ್ಲ ಇದ್ದಲ್ಲೇ ಬಿಟ್ಟು ತಾವು ಮುಂದೆ ಹೋಗಿ ದಾರಿಯ ತುದಿಯ ತಿರುವಿನಲ್ಲಿ ಮರೆಯಾದರು. ತೇಜಸ್ವಿ ಎದುರಿಗಿಲ್ಲ, ಅವರು ಬಿಟ್ಟು ಹೋದ ನೆನಪುಗಳಿವೆ, ಚಿತ್ರಗಳಿವೆ, ಕೊಟ್ಟು ಹೋದ ತಿಳುವಳಿಕೆಯಿದೆ...

ನನ್ನ ಶಾಲಾ ದಿನಗಳಲ್ಲಿ ತೇಜಸ್ವಿಯವರ 'ಸ್ವರೂಪ' ಓದಿದ್ದು. ಅದನ್ನು ತಮ್ಮ ಸಹ್ಯಾದ್ರಿ ಪ್ರಕಾಶನದ ಇತರ ಕೆಲವು ಪುಸ್ತಕಗಳ ಜೊತೆ ಕಡಿದಾಳು ಶಾಮಣ್ಣ ನಮ್ಮ ತಂದೆಗೆ ಕೊಟ್ಟಿದ್ದರು. ಕರ್ವಾಲೋ ಕಾದಂಬರಿ ಓದಿದ ಮೇಲೆ ತೇಜಸ್ವಿಯವರ ಕುರಿತು ಕುತೂಹಲ ಜಾಸ್ತಿಯಾಗಿತ್ತು. ತೇಜಸ್ವಿಯವರನ್ನು ಪ್ರತ್ಯಕ್ಷವಾಗಿ ನೋಡುವ ಮೊದಲೇ ಅವರನ್ನು ಕುರಿತು ಒಬ್ಬ ವಿಶಿಷ್ಟ ವ್ಯಕ್ತಿ ಎಂಬ ಕಲ್ಪನೆಯಿತ್ತು.

ಮಾನಸ ಗಂಗೋತ್ರಿಯಲ್ಲಿ ಎಂಎ ಓದಲು ಹಾಸ್ಟೆಲ್ ನಲ್ಲಿದ್ದಾಗ 'ಶಾಲಿಮಾರ್' ಥಿಯೇಟರ್ ನಲ್ಲಿ 'ರೋಮನ್ ಹಾಲಿಡೇ' ಎಂಬ ಗ್ರೆಗರಿಪೆಕ್ ಮತ್ತು ಆಡ್ರೆ ಹೆಬ್ಬರ್ನ್ ನಟಿಸಿದ ಹಳೆಯ ಸಿನೆಮಾ ಬಂದಿತ್ತು. ಸಹಪಾಠಿ ಅನಲಾ (ತೇಜಸ್ವಿ ಅವರ ಸೋದರ ಸಂಬಂಧಿ) 'ತೇಜಸ್ವಣ್ಣ ಈ ಸಿನೆಮಾನ 7-8 ಸಲ ನೋಡಿದಾರಂತೆ, ಚೆನ್ನಾಗಿದೆಯಂತೆ' ಅಂದಳು. ನಾವೂ ಹೋಗಿ ನೋಡಿದೆವು. ಸಿನೆಮ ತುಂಬಾ ಚೆನ್ನಾಗಿತ್ತು. ನಟಿ ಆಡ್ರೆ ಹೆಬ್ಬರ್ಸ್ ರಾಜಕುಮಾರಿಯಾಗಿಯೂ ಮತ್ತು ಗ್ರೆಗರಿಪೆಕ್ ಪತ್ರಕರ್ತನಾಗಿಯು ಅದ್ಭುತವಾಗಿ ನಟಿಸಿದ್ದರು. ಆಮೇಲೆ ನನಗನಿಸಿದ್ದು, ಶ್ರೀಮಂತಿಕೆಯ ಕೋಟೆಯಿಂದ ಹೊರಬಂದು ರಾಜಕುಮಾರಿಯೊಬ್ಬಳು ಪತ್ರಕರ್ತನನ್ನು ಪ್ರೀತಿಸುವ ಕಥೆ ಅದು. ಮೈಸೂರಿನ ಪ್ರತಿಷ್ಠೆಯನ್ನೆಲ್ಲ ಬಿಟ್ಟು- ರಾಜೇಶ್ವರಿಯವರ ಜೊತೆ ಮೂಡಿಗೆರೆಯ ಕಾಡಿನಲ್ಲಿ ನೆಲೆಸಿದ್ದ ತೇಜಸ್ವಿಯವರಿಗೆ ಸಹಜವಾಗಿಯೇ ಆ ಸಿನೆಮಾ ಇಷ್ಟವಾಗಿರಬೇಕು. ಅವರಿಗೆ ಪ್ರಿಯವಾದ ಸದಭಿರುಚಿಯ ತಿಳಿಹಾಸ್ಯದ ಶೈಲಿ ಬೇರೆ ಆ ಸಿನೆಮಾಕ್ಕೆ ಇತ್ತು.

ಕುವೆಂಪು ಅವರ ಮನೆಯಿಂದಲೇ ಬರುತ್ತಿದ್ದ ಸಹಪಾಠಿ ಅನಲ ತೇಜಸ್ವಿಯವರ ಕುರಿತು ಏನಾದರೂ ಹೇಳುತ್ತಿರುತ್ತಿದ್ದಳು. ತೇಜಸ್ವಿಯವರ ನಾಯಿ ಹೆಸರು ಕಿವಿ, ಅದಕ್ಕೆ ತೇಜಸ್ವಿ ಏಡಿ ಹಿಡಿಯುವುದನ್ನು ಕಲಿಸಿದ್ದಾರೆ. ಮೈಸೂರಿಗೆ ಬಂದಾಗ ಗಂಟೆಗಟ್ಟಲೆ ಕಾದು, ತೆಂಗಿನ ಮರದ ಮೇಲೆ ಕುಳಿತ ಗೂಬೆ ಫೋಟೋ ತೆಗೆದರು. ತೇಜಸ್ವಿ ಮಕ್ಕಳೆಲ್ಲರನ್ನೂ ಐಸ್ ಕ್ರೀಮ್ ತಿನ್ನಲು ಕರೆದೊಯ್ದಿದ್ದರು. ಹೀಗೆ ಅನಲಾ ಹೇಳುತ್ತಿದ್ದ ವಿವರಗಳು ಅವರ ಬಗ್ಗೆ ಕುತೂಹಲ ಮೂಡಿಸಿತ್ತು. ನಾನು ಎಂಎ ಓದುತ್ತಿದ್ದಾಗ CIIL(ಭಾರತೀಯ ಭಾಷಾಸಂಸ್ಥಾನ)ದಲ್ಲಿ ಅವರೊಮ್ಮೆ ಭಾಷಣ ಮಾಡಿದ್ದರು. ಅದೇ ವೇದಿಕೆಯಲ್ಲಿ ಚಂಪಾ ಕೂಡ ಮಾತನಾಡಿದ್ದರು. ಆ ನಂತರ ತೇಜಸ್ವಿಯವರನ್ನು ನೋಡಿದ್ದು 'ಕುವೆಂಪು ತೊಂಭತ್ತು' ಕಾರ್ಯಕ್ರಮದಲ್ಲಿ.

ಕುಪ್ಪಳಿಯ ಕಾರ್ಯಕ್ರಮಗಳಿಗೆ ಬರುತ್ತಿದ್ದ ತೇಜಸ್ವಿಯವರಿಗೆ ವೇದಿಕೆಯ ಮೇಲೆ ಮಾತನಾಡುವುದಕ್ಕಿಂತ ಅಲ್ಲೆಲ್ಲೋ ಮರದ ನೆರಳಲ್ಲಿ ಕುಳಿತು ಕೇಳಿಸಿಕೊಳ್ಳುತ್ತಿದ್ದುದೇ ಹೆಚ್ಚು ಇಷ್ಟವಾಗುತ್ತಿತ್ತು. ಅವರ ಪುಸ್ತಕಗಳಲ್ಲಿ ಅವರೇ ವ್ಯಕ್ತಪಡಿಸಿರುವಂತೆ ಮಲೆನಾಡಿನ ಸಣ್ಣ ಊರುಗಳ ಜೀವನ ಅವರಿಗೆ ಇಷ್ಟವಾಗಿತ್ತು. ಇದಕ್ಕೊಂದು ನಿದರ್ಶನ- ಅವರ ಗೆಳೆಯ ಶ್ರೀರಾಮ್ ಇಂಗ್ಲಿಷ್ ಅಧ್ಯಾಪಕರಾಗಿದ್ದವರು ನಿವೃತ್ತರಾದಾಗ ಪ್ರಾಸಂಗಿಕವಾಗಿ ನನ್ನ ಪತಿ ಶ್ರೀಕಂಠಮೂರ್ತಿಯವರಿಗೆ (ಮೂಲತಃ ಮೈಸೂರಿನವರು, ಇಂಗ್ಲಿಷ್ ಅಧ್ಯಾಪಕರು) ಮೈಸೂರಿಗೆ ವರ್ಗ ಮಾಡಿಸಿಕೊಳ್ತೀರೇನ್ರಿ ಅಂದರು. ತತ್ ಕ್ಷಣ ಪಕ್ಕದಲ್ಲಿದ್ದ ತೇಜಸ್ವಿ `ಅವರಿಗೇನ್ ತಲೆ ಕೆಟ್ಟಿದೆಯೇನ್ರಿ ತೀರ್ಥಹಳ್ಳಿ ಬಿಟ್ಟು ಮೈಸೂರಿಗೆ ಹೋಗಕ್ಕೆ' ಅಂದರು. ಈ ಸಂಭಾಷಣೆ ನಡೆದಿದ್ದು ನಮ್ಮ ಮನೆಯಲ್ಲೇ. ಸಣ್ಣ ಊರಿನ ಮೌನ ಮತ್ತು ಏಕಾಂತದ ಬದುಕನ್ನು ಇಷ್ಟಪಡುತ್ತಿದ್ದ ತೇಜಸ್ವಿ ಜತೆಗೆ, ಆಧುನಿಕ ತಂತ್ರಜ್ಞಾನದ ಕ್ಯಾಮರ, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡ ಮೊದಲ ಕನ್ನಡ ಲೇಖಕರಲ್ಲೊಬ್ಬರು.

1994ರಲ್ಲಿ ತೀರ್ಥಹಳ್ಳಿಯಲ್ಲಿ ಮಹಿಳಾ ವೇದಿಕೆಯಲ್ಲಿ ಮಾತನಾಡಿ ಎಂದು ಕರೆದಾಗ ಮೊದಲು ಇಲ್ಲ ಅಂದರು. ಅವರಿಗೆ ಸಾರ್ವಜನಿಕ ಭಾಷಣಗಲು ಇಷ್ಟವಾಗುತ್ತಿರಲಿಲ್ಲ. ಆಮೇಲೆ ನಮ್ಮ ಒತ್ತಾಯಕ್ಕೆ ಬಂದರು. ವೇದಿಕೆಯಲ್ಲಿ ರಾಜೇಶ್ವರಿ, ಪದ್ಮಾಶ್ರೀರಾಮ್ ಮತ್ತು ಶ್ರೀರಾಮ್ ಇದ್ದರು.

ಮಹಿಳಾ ಚಳುವಳಿ, ಸ್ತ್ರೀವಾದ ಇತ್ಯಾದಿ ಹೇಳುತ್ತಾ ತೇಜಸ್ವಿ ಗಂಡು-ಹೆಣ್ಣಿನ ವ್ಯಕ್ತಿತ್ವ, ಹೊಂದಾಣಿಕೆಗಳನ್ನು ಕುರಿತು ಕೊಟ್ಟ ಒಂದು ನಿದರ್ಶನ- `ರಸ್ತೆಯ ಮೇಲೆ ಇಬ್ಬರು ಅಪರಿಚಿತರು ಭೇಟಿಯಾಗಿ ಒಂದಷ್ಟು ದೂರ ಒಟ್ಟಿಗೇ ನಡೆದರೆ ಸ್ವಲ್ಪ ದೂರ ಹೋಗುವುದರಲ್ಲೇ ಅವರಲ್ಲಿ ಮಾತಿನ ಭಿನ್ನಾಭಿಪ್ರಾಯ ಬರಬಹುದು. ಇನ್ನು ಜೀವಮಾನ ಪೂರ್ತಿ ಒಟ್ಟಿಗೆ ಇರುವ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಬರದಿರಲು ಹೇಗೆ ಸಾಧ್ಯ? ಇಲ್ಲಿ ಆಕರ್ಷಣೆ ಇದ್ದೂ ಅಂತರವನ್ನು ಕಾಯ್ದುಕೊಳ್ಳಬೇಕು. ಹೇಗೆ 'Orbit'ನಲ್ಲಿ ಗ್ರಹಗಳು ಪರಸ್ಪರ ಆಕರ್ಷಣೆಯನ್ನು ಕಳೆದುಕೊಳ್ಳದೆ, ತಮ್ಮ ನಡುವೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಸುತ್ತುತ್ತಿರುತ್ತವೋ ಹಾಗೇ ಪರಸ್ಪರರ Space ಅನ್ನು ಕಾಯ್ದುಕೊಂಡು ಇರಬೇಕು. ಸ್ವಲ್ಪ ದೂರ ಜಾಸ್ತಿಯಾದರೆ ಗುರುತ್ವಾಕರ್ಷಣೆಯ ವಲಯದಿಂದ ಹೊರಹೋಗುವಂತಾಗುತ್ತಾರೆ. ಹತ್ತಿರ ಬಂದರೆ ಘರ್ಷಣೆಯಾಗಿ ವಿನಾಶ, ಹೀಗೆ ನಿರ್ದಿಷ್ಟ ಅಂತರದಲ್ಲಿ ಆಕರ್ಷಣೆ-ವಿಕರ್ಷಣೆ ಇರಬೇಕು' ಎಂದು ಹೇಳಿದ್ದರು.

ಶಿವರಾಮ ಕಾರಂತರು ತೇಜಸ್ವಿಯವರ ಮನೆಗೆ ಬಂದು ಎರಡು ದಿನ ತಂಗಿದ್ದರು. ತೋಟದಲ್ಲಿ ಚಟುವಟಿಕೆಯಿಂದ ಓಡಾಡಿಕೊಂಡು ತೇಜಸ್ವಿಯವರು ತೆಗೆದ ಹಕ್ಕಿ ಚಿತ್ರಗಳನ್ನು ನೋಡಿ, ಅವರ ಮನೆಯಲ್ಲೂ ಹೊರಗೂ 90 ದಾಟಿದ ಆ ಇಳಿವಯಸ್ಸಿನಲ್ಲೂ ಕಾರಂತರು ತೇಜಸ್ವಿಯವರು ಮಾಡಿದ ಎಲ್ಲಾ ಕೆಲಸಗಳನ್ನೂ ಮೆಚ್ಚಿಕೊಂಡು ಮತ್ತೊಮ್ಮೆ ವಿರಾಮವಾಗಿ ಬರುತ್ತೇನೆಂದು ಹೇಳಿ ಹೋದುದನ್ನು ನೆನಪಿಸಿಕೊಳ್ಳುತ್ತಾ 'ಎಂಥ ಚಟುವಟಿಕೆಯ ಜೀವ, ನಾವು ಆ ವಯಸ್ಸಿಗೆ ಸತ್ತು ಗೊಬ್ಬರ ಆಗಿರ್ತೀವಿ' ಎಂದಿದ್ದರು. (ಅವರು ಬಳಸಿದ ಪದಗಳೇ ಇವು.)

ಕುಪ್ಪಳಿ ಮನೆ ನವೀಕರಣ ಆಗುವ ಮೊದಲು 'ಕುವೆಂಪು 90' ಕಾರ್ಯಕ್ರಮ ನಡೆದಾಗ ತೇಜಸ್ವಿ ಎರಡು ದಿನವೂ ಅಲ್ಲಿದ್ದರು. ಮಧ್ಯಾಹ್ನದ ಸಮಯ ವೇದಿಕೆ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಮರದ ನೆರಳಿನಲ್ಲಿ ಮರಳಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ನಾವು ಆಶ್ಚರ್ಯದಿಂದ ನೋಡುತ್ತಿದ್ದರೆ ರಾಜೇಶ್ವರಿಯವರು `ಅವರು ಹೊರಗಡೆ ಹೋದಾಗ ಯಾವ ಸೌಲಭ್ಯವನ್ನೂ ನಿರೀಕ್ಷಿಸುವುದಿಲ್ಲ, ಹೇಗಿದ್ದರೆ ಹಾಗೆ ಹೊಂದಿಕೊಳ್ಳುತ್ತಾರೆ' ಎಂದರು. ನಮ್ಮ ಕಾಲೇಜಿಗೂ ಬಂದು ವಿದ್ಯಾರ್ಥಿಗಳೊಡನೆ ಸಂವಾದ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು.

ಚಿಕ್ಕಮಗಳೂರಿಗೆ ಹೋದಾಗ ಎರಡು ಸಲ ನಾವು ತೇಜಸ್ವಿಯವರ ಮನೆಗೆ ಹೋಗಿದ್ದೆವು. ಅವರ ಸರಳತೆಗೆ ಅವರ ಮನೆಯೂ ನಿದರ್ಶನವಾಗಿತ್ತು. ಸರಳವಾದ ಬೆತ್ತದ ಕುರ್ಚಿಗಳೇ ಪೀಠೋಪಕರಣ. ಅವುಗಳ ಮೇಲೆ ಮೆತ್ತೆಯನ್ನು ಹಾಕಿರಲಿಲ್ಲ. 'ಹಾಗಿದ್ದರೇ ಸರಿ' ಎಂಬುದು ತೇಜಸ್ವಿಯವರ ಅಭಿಪ್ರಾಯ. ಮನೆಯಲ್ಲಿ ಎಲ್ಲೂ 'ಥಳ ಫಳ' ಇರಲಿಲ್ಲ. ಮನೆಯ ಸುತ್ತ ಹಲವು ಜಾತಿಯ ಹಣ್ಣಿನ ಗಿಡಗಳು- ಅವುಗಳಲ್ಲಿ ಬಿಟ್ಟ ಹಣ್ಣುಗಳೆಲ್ಲ ಹಕ್ಕಿಗಳಿಗೇ ಮೀಸಲು. ಟೆರೇಸ್ ಮೇಲೂ ಹಕ್ಕಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ. ಮನೆಯ ಹಿಂಭಾಗದಲ್ಲಿದ್ದ ಕೆರೆಯಲ್ಲಿ ತುಂಬ ನೀರು. ಮೂಡಿಗೆರೆಯ ಮಾಂಸದಂಗಡಿಯಲ್ಲಿ ಸಿಕ್ಕ ಎರಡು ಬಾತುಕೋಳಿ ಮರಿಗಳನ್ನು ತಂದು ಆ ಕೆರೆಯಲ್ಲಿ ಸಾಕಿ ಅವು ಸುಂದರವಾಗಿ ಬೆಳೆದ ಫೋಟೋಗಳನ್ನು ನನಗೆ 'ಈಮೇಲ್'ನಲ್ಲಿ ಕಳಿಸಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆ ಬಾತುಗಳನ್ನು ಯಾರೋ ಕದ್ದೊಯ್ದರು ಎಂದು ರಾಜೇಶ್ವರಿಯವರು ಹೇಳಿದರು. ಎಷ್ಟೋ ಹಕ್ಕಿ ಚಿತ್ರಗಳನ್ನು ಅವುಗಳಿಗೆ ಸಂಬಂಧಿಸಿದ ಕತೆಗಳನ್ನೂ ಅವರು ಈ ಮೇಲ್ ನಲ್ಲಿ ಕಳುಹಿಸಿದ್ದರು. ಒಮ್ಮೆ ತೀರ್ಥಹಳ್ಳಿಗೆ ಬಂದಾಗ ಅವರು ತೆಗೆದ 70 ಹಕ್ಕಿಯ ಚಿತ್ರಗಳನ್ನು ಸಿಡಿಯಲ್ಲಿ ಹಾಕಿಕೊಂಡು ಬಂದು ನಮ್ಮ ಕಂಪ್ಯೂಟರ್ ಗೆ ಹಾಕಿಕೊಟ್ಟರು (10 ವರ್ಷಗಳ ಹಿಂದೆ).

ನನ್ನ ಪತಿ ಶ್ರೀಕಂಠಮೂರ್ತಿಯವರು ಪರಿಸರದ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ಪ್ರಕಟಿಸಲು ಅನುಮತಿ ಕೇಳಿದಾಗ `ಅದಕ್ಕೇನ್ರಿ ಯಾವ ಕಥೆ ಬೇಕಾದರೂ ಅನುವಾದಿಸಿ' ಎಂದು ಅನುಮತಿ ಪತ್ರ ಬರೆದು ಕಳಿಸಿದರು. ತೇಜಸ್ವಿಯವರೊಡನೆ ಲೇಖಕರು

ತೇಜಸ್ವಿಯವರ ಮನೆಯ ಪರಿಸರವೇ ಅವರ ಅಭಿರುಚಿಯನ್ನು ತಿಳಿಸುವಂತಿದೆ. ಹಿಂಭಾಗದ ಕೆರೆ, ಅಡಿಕೆ ತೋಟ, ಪಕ್ಕದಲ್ಲಿ ಕಾಫಿ ತೋಟ, ಪಕ್ಕದ ಕಣಿವೆಯಲ್ಲಿ ಹರಿಯುತ್ತಾ ಮನೆಗೆ ನೀರೊದಗಿಸುವ ಪುಟ್ಟ ಝರಿ, (ಒಂದು ಝರಿಯ ಸುತ್ತ ಕಥೆಗೆ ಸ್ಫೂರ್ತಿ) ಮರವೆಲ್ಲಾ ಮುಚ್ಚಿಹೋಗುವಂತೆ ಕಾಡು ಮರವೊಂದಕ್ಕೆ ಹಬ್ಬಿ ನೀಲಿ ಹೂ ತಳೆದ ಥನ್ ಬರ್ಜಿಯಾ ಬಳ್ಳಿ, 'ನಿರುತ್ತರಾ' ಹೆಸರಿನ ಗೇಟ್, ಪಕ್ಕದಲ್ಲಿ ಕತ್ತರಿಸದೇ ಬಿಟ್ಟ ಬೇಲಿಯ ಪೊದೆಗಳು, ಪ್ರತಿಯೊಂದೂ ತೇಜಸ್ವಿಯವರು 'ವಿಶಿಷ್ಟ' ಎಂದು ತಿಳಿಸುತ್ತಿವೆ.

ಒಮ್ಮೆ ಮೈಸೂರಿನಲ್ಲಿ ಅಕ್ಯಾಡೆಮಿ ಸ್ಟ್ಯಾಫ್ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಫ್ರೆಷರ್ ಕೋರ್ಸಿನ ಕ್ಲಾಸ್ ಮುಗಿಸಿಕೊಂಡು ಜಯಲಕ್ಷ್ಮೀಪುರಂನ ನಮ್ಮ ಮನೆಗೆ ಸಂಜೆ ನಡೆದು ಬರುತ್ತಿದ್ದೆ. ತೇಜಸ್ವಿ ತಮ್ಮ ಹೊಸ ಬಿಳಿ ಝೆನ್ ಕಾರ್ ನಲ್ಲಿ ಎದುರಿನಿಂದ ಬಂದರು. ಅವರು ಶ್ರೀರಾಂ ಮನೆಗೆ ಹೋಗುತ್ತಿದ್ದರು. ರಂಗಾಯಣದಲ್ಲಿ ತಮ್ಮ ಚಿತ್ರ ಪ್ರದರ್ಶನ ಇರುವುದಾಗಿ ತಿಳಿಸಿ, ಈಗ ಶ್ರೀರಾಂ ಮನೇಲಿ ಆ ಚಿತ್ರಗಳಿವೆ ಬಂದು ನೋಡು ಎಂದರು. ಅವರ ಜೊತೆಗೆ ಹೋಗಿ ಶ್ರೀರಾಂ ಮನೇಲಿ ಪುಸ್ತಕದ ಕಟ್ಟುಗಳ ನಡುವೆ ಇದ್ದ ತೇಜಸ್ವಿಯವರ ಚಿತ್ರಗಳನ್ನು ನೋಡಿ 'ಕಂಪ್ಯೂಟರ್ ಗ್ರಾಫಿಕ್' ಬಗ್ಗೆ ಅವರ ಮಾತುಗಳನ್ನು ಕೇಳಿಸಿಕೊಂಡು ಬಂದೆ. ಯಾವಾಗಲಾದರೂ ಅವರ ಮನೆಗೆ ಫೋನ್ ಮಾಡಿದರೆ, ಗಟ್ಟಿ ದನಿಯಲ್ಲಿ ಮಾತಾಡುತ್ತಾ ಮುಕ್ತವಾಗಿ ನಗುವುದು ಅವರ ಅಭ್ಯಾಸ. ತಮ್ಮ ಗಮನ ಸೆಳೆದ ನಿಸರ್ಗವ್ಯಾಪಾರಗಳ ಕುರಿತು You see, it is very mysterious ಎಂದು ಹೇಳುತ್ತಿದ್ದರು. 'ನಾನೂ ಅನ್ನಾ ತಿನ್ನಾ ಮನುಷ್ಯ' ಎಂದು ತಮ್ಮನ್ನು ಸಾಮಾನ್ಯ ಎಂದು ಸ್ಪಷ್ಟಪಡಿಸಲು ಹೇಳುತ್ತಿದ್ದುದು ಅವರದೇ ಶೈಲಿಯಲ್ಲಿ. ಮುಗ್ಧಮಗುವಿನಂತೆ ಕುತೂಹಲದ ಪ್ರವೃತ್ತಿ ಅವರ ಪ್ರತಿಯೊಂದು ನಡವಳಿಕೆಯಲ್ಲೂ ಕಾಣುತ್ತಿತ್ತು. ಮುಖಸ್ತುತಿ ಮಾಡುವವರನ್ನು ಕಂಡರೆ ಅವರಿಗೆ ಬೇಸರ. 'ನಾನು ಕನ್ನಡಕ್ಕೆ ಅನುವಾದಿಸಿದ ಅಮೃತಾ ಪ್ರೀತಂ ಅವರ 'ಪಿಂಜರ್' ಪುಸ್ತಕ ತಲುಪಿದ ಕೂಡಲೆ ಒಂದೇ ಸಲ ಓದಿ ಮುಗಿಸಿದೆ ನೋಡು, ಚೆನ್ನಾಗಿದೆ' ಎಂದು ಹೇಳುತ್ತಾ, ದೇಶ ವಿಭಜನೆಯ ಕಾಲದ ಹಿಂಸೆಯ ಕುರಿತು ಬಂದ ಪುಸ್ತಕಗಳ ಕುರಿತು ಮಾತನಾಡಿದರು.

ತೇಜಸ್ವಿ ಎಲ್ಲೂ ಒಬ್ಬರೇ ಹೋಗುತ್ತಿರಲಿಲ್ಲ. ಜೊತೆಗೆ ರಾಜೇಶ್ವರಿ ಇದ್ದೇ ಇರುತ್ತಿದ್ದರು. ಈಗ ಅವರ ಮನೆಯಲ್ಲೂ, ಸಾಹಿತ್ಯ ಲೋಕದಲ್ಲೂ, ಸಮಾಜದಲ್ಲೂ ತೇಜಸ್ವಿಯವರ ಅನುಪಸ್ಥಿತಿ ಎದ್ದುಕಾಣುವಂತಿದೆ.

ಕೆಂಡಸಂಪಿಗೆಯಲ್ಲಿ ನನ್ನ ಲೇಖನ

http://kendasampige.com/article.php?id=3203

ಹೊಸ ವರ್ಷದ ಶುಭಾಶಯಗಳು